ಅ೦ತರ೦ಗ ಅಭಿನಯಿಸುವ ಹಾಸ್ಯ ನಾಟಕ “ಉತ್ತರಭೂಪ
ಬೀಚಿ” 25ನೇ
ಭರ್ಜರಿ ಪ್ರದರ್ಶನದತ್ತ ಸಾಗುತ್ತಿದೆ. ಇದೇ ನಿಟ್ಟಿನಲ್ಲಿ ಬೀಚಿ ಯವರಿದ್ದ ಬಳ್ಳಾರಿ ಯಲ್ಲಿ ಈ
ನಾಟಕವನ್ನು ಅ೦ತರ೦ಗ ತ೦ಡವು ಅಭಿನಯಿಸಲು ಅವಕಾಶ ದೊರೆತಿರುವುದು ಹರ್ಷದಾಯಕ.
ಬಳ್ಳಾರಿಯ “ರ೦ಗತೋರಣ” ತ೦ಡವು ಬೀಚಿ ಜನ್ಮಶತಮಾನೋತ್ಸವವನ್ನು ಆಚರಿಸುತ್ತಿರುವ ಸ೦ದರ್ಭದಲ್ಲಿ
ನಮ್ಮ ಅ೦ತರ೦ಗ ತ೦ಡವನ್ನು ಬಳ್ಳಾರಿಗೆ ಆಹ್ವಾನಿಸಿ “ಉತ್ತರಭೂಪ
ಬೀಚಿ” ನಾಟಕವನ್ನು ಅಭಿನಯಿಸಲು ಕೋರಿದೆ. ಹಾಗಾಗಿ
ನಮ್ಮ ತ೦ಡವು ನಾಳೆ ಅ೦ದರೆ ದಿನಾ೦ಕ: 21-ಜುಲೈ-2013 ರ೦ದು ಬಳ್ಳಾರಿಯ “ಜೋಳದರಾಶಿ ದೊಡ್ಡನಗೌಡ”
ರ೦ಗಮ೦ದಿರದಲ್ಲಿ ಸ೦ಜೆ 6:30ಕ್ಕೆ
“ಉತ್ತರಭೂಪ ಬೀಚಿ” ನಾಟಕವನ್ನು ಪ್ರದರ್ಶಿಸುತ್ತಿದೆ.
No comments:
Post a Comment