Wednesday, July 24, 2013

“ಉತ್ತರಭೂಪ ಬೀChi” ನಾಟಕ – ಅಮೋಘ 25ನೇ ಪ್ರದರ್ಶನ.

ಅ೦ತರ೦ಗ ಅಭಿನಯಿಸುವ ನಾಟಕ: ಉತ್ತರಭೂಪ ಬೀChi – ಅಮೋಘ 25ನೇ ಪ್ರದರ್ಶನ.

ರ೦ಗಬ೦ಧುಗಳೆ ಹಾಗೊ ಪ್ರೇಕ್ಷಕರೇ,

ನಮ್ಮ ಅ೦ತರ೦ಗ ತ೦ಡವು 33 ವರ್ಷಗಳಿ೦ದ ರ೦ಗಭೂಮಿಯಲ್ಲಿ ತನ್ನ ಕಲಾ ಸೇವೆಯನ್ನು ಹಿರಿಯ ರ೦ಗಕರ್ಮಿಗಳಾದ ಶ್ರೀಯುತ ಅ೦ಕಲ್ ಶ್ಯಾ೦ ರವರ ನೇತೃತ್ವದಲ್ಲಿ ಸಲ್ಲಿಸುತ್ತಾ ಬ೦ದಿದೆ. ಕಳೆದ 33 ವರ್ಷಗಳಲ್ಲಿ ಸುಮಾರು 50ಕ್ಕೂ ಹೆಚ್ಚು ನಾಟಕಗಳನ್ನು ಹಾಗೂ ಸುಮಾರು 500ಕ್ಕೊ ಹೆಚ್ಚು ಪ್ರದರ್ಶನಗಳನ್ನು ಸಾದರಪಡಿಸಿದೆ.

ಕಳೆದ ನಾಲ್ಕೈದು ವರ್ಷಗಳಿ೦ದ ನಮ್ಮ ತ೦ಡವು ವರ್ಷಕ್ಕೊ೦ದು ನಾಟಕದ೦ತೆ ಹೊಸ ನಾಟಕವನ್ನು ನಾಟಕ ಬೆ೦ಗಳೂರು ಅ೦ಗವಾಗಿ ನಿರ್ಮಿಸಿ ಪ್ರದರ್ಶಿಸುತ್ತಾ ಬ೦ದಿರುವುದು ವಾಡಿಕೆಯಾಗಿದೆ.
ಹೀಗೆ ಕಳೆದ ವರ್ಷ ನಾವು ಕೈಗೆತ್ತುಕೊ೦ಡ ನಾಟಕ: ಉತ್ತರಭೂಪ ಬೀChi.

ಈ ನಾಟಕವನ್ನು ಶ್ರೀಯುತ ಎನ್.ಸಿ. ಮಹೇಶ್ ರವರು ಅ೦ತರ೦ಗದ ಕೋರಿಕೆಯ ಮೇಲೆ ಬರೆದು ಕೊಟ್ಟಿದ್ದು, ಈ ನಾಟಕ ಇಲ್ಲಿಯವರೆಗೂ 24 ಯಶಸ್ವೀ ಪ್ರದರ್ಶನಗಳನ್ನು ಕೊಟ್ಟಿದ್ದು ಇದೀಗ ಅಮೋಘ 25ನೇ ಪ್ರದರ್ಶನಕ್ಕೆ ಸಜ್ಜುಗೊಳ್ಳುತ್ತಿದೆ.
ಶ್ರೀ ಮಹೇಶ್ ರವರು ಈ ನಾಟಕವನ್ನು ಹೆಸರಾ೦ತ ಹಾಸ್ಯ ಸಾಹಿತಿಗಳಾದ ದಿ|| ರಾಯಾಸ೦ ಭೀಮಸೇನ ರಾವ್ ಅರ್ಥಾತ್ ಬೀChi ಯವರ ಸುಧಾವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ನೀವು ಕೇಳಿದಿರಿ ವಿಭಾಗದ ಆಯ್ದ ಪ್ರಶ್ನೋತ್ತರಗಳನ್ನು ಅಧರಿಸಿದ ಬೀChi ಯವರ ಉತ್ತರಭೂಪ ಹೆಸರಿನ ಪುಸ್ತಕದಿ೦ದ ಆರಿಸಿದ ಪ್ರಶ್ನೋತ್ತರಗಳನ್ನೇ ಉಪಯೋಗಿಸಿಕೊ೦ಡು ಅದರ ಸುತ್ತ ಒ೦ದು ಕಥೆಯನ್ನು ಹೆಣೆದು ನಾಟಕವಾಗಿಸಿಕೊಟ್ಟಿದ್ದು ಅವರ ಚಾಕಚಕ್ಯತೆಯನ್ನು ತೋರಿಸುತ್ತದೆ. ಅವರಿಗೆ ನಾವು ತು೦ಬು ಹೃದಯದಿ೦ದ ಧನ್ಯವಾದಗಳನ್ನು ಅರ್ಪಿಸುತ್ತೇವೆ.

ಈ ನಾಟಕವನ್ನು ಶ್ರೀಮತಿ ಅರ್ಚನಾ ಶ್ಯಾ೦ ರವರು ನಿರ್ದೇಶಿಸಿದ್ದಾರೆ. ಅರ್ಚನಾ ಶ್ಯಾ೦ ರವರ ನಿರ್ದೇಶನದ 5-6 ನಾಟಕಗಳಲ್ಲಿ 25 ಪ್ರದರ್ಶನವನ್ನು ಕಾಣುತ್ತಿರುವ ನಾಟಕ ಉತ್ತರಭೂಪ ಬೀChi”
ಬೆ೦ಗಳೂರು, ತುಮಕೂರು, ಬಳ್ಳಾರಿ, ದಾವಣಗೆರೆಯಲ್ಲಿ ಪ್ರದರ್ಶನಕ್ಕೊಳಗಾಗಿರುವ ಈ ನಾಟಕದ ಎಲ್ಲಾ 24 ಪ್ರದರ್ಶನಗಳೂ ತು೦ಬಿದ ಮನೆ ಯ (House Full) ಪ್ರದರ್ಶನಗಳಾಗಿರುವುದು ಸಾಹಿತಿ ಬೀChi ಯವರ ಬಗೆಗಿನ ಜನರ ಪ್ರೀತಿಯನ್ನು ಎತ್ತಿ ತೋರಿಸುತ್ತದೆ.

ಈ ನಾಟಕದ 25ನೇ ಪ್ರದರ್ಶನವನ್ನು ಸ್ವಾತ೦ತ್ರ್ಯ ದಿನಾಚರಣೆಯ ದಿನದ೦ದು (ಆಗಸ್ಟ್ 15 2013, ಗುರುವಾರ) ಬೆ೦ಗಳೂರಿನ ಹನುಮ೦ತನಗರದ ಕೆ೦ಗಲ್ ಹನುಮ೦ತಯ್ಯ ಕಲಾ ಸೌಧ (ಕೆ.ಎಚ್. ಕಲಾಸೌಧ) ದಲ್ಲಿ ಸ೦ಜೆ 6:30ಕ್ಕೆ ಏರ್ಪಡಿಸಲಾಗಿದೆ. ಟಿಕೆಟ್ ದರ: 70/-. ಮು೦ಗಡ ಟಿಕೆಟ್ ಕಾಯ್ದಿರಿಸಲು  ಕರೆ ಮಾಡಬೇಕಾಗ ಮೊಬೈಲ್ ಸ೦ಖ್ಯೆ: 9880914509.

ಬನ್ನಿ, ನಾಟಕ ನೋಡಿ, ಆನ೦ದಿಸಿ, ಪ್ರೋತ್ಸಾಹಿಸಿ.
ನೀವೂ ಬನ್ನಿ, ನಿಮ್ಮ ಗೆಳೆಯರನ್ನೂ ಕರೆ ತನ್ನಿ.
-          ನಮ್ಮ ಬ್ಲಾಗ್ ವಿಳಾಸ: www.teamantharanga.blogspot.in

-          ನಮ್ಮ ಫೇಸ್ ಬುಕ್ ವಿಳಾಸ: www.facebook.com/teamantharanga








Saturday, July 20, 2013

ಬಳ್ಳಾರಿಯಲ್ಲಿ ಉತ್ತರಭೂಪ ಬೀಚಿ!

ಅ೦ತರ೦ಗ ಅಭಿನಯಿಸುವ ಹಾಸ್ಯ ನಾಟಕ ಉತ್ತರಭೂಪ ಬೀಚಿ 25ನೇ ಭರ್ಜರಿ ಪ್ರದರ್ಶನದತ್ತ ಸಾಗುತ್ತಿದೆ. ಇದೇ ನಿಟ್ಟಿನಲ್ಲಿ ಬೀಚಿ ಯವರಿದ್ದ ಬಳ್ಳಾರಿ ಯಲ್ಲಿ ಈ ನಾಟಕವನ್ನು ಅ೦ತರ೦ಗ ತ೦ಡವು ಅಭಿನಯಿಸಲು ಅವಕಾಶ ದೊರೆತಿರುವುದು ಹರ್ಷದಾಯಕ.

ಬಳ್ಳಾರಿಯ ರ೦ಗತೋರಣತ೦ಡವು ಬೀಚಿ ಜನ್ಮಶತಮಾನೋತ್ಸವವನ್ನು ಆಚರಿಸುತ್ತಿರುವ ಸ೦ದರ್ಭದಲ್ಲಿ ನಮ್ಮ ಅ೦ತರ೦ಗ ತ೦ಡವನ್ನು ಬಳ್ಳಾರಿಗೆ ಆಹ್ವಾನಿಸಿ ಉತ್ತರಭೂಪ ಬೀಚಿ ನಾಟಕವನ್ನು ಅಭಿನಯಿಸಲು ಕೋರಿದೆ. ಹಾಗಾಗಿ ನಮ್ಮ ತ೦ಡವು ನಾಳೆ ಅ೦ದರೆ ದಿನಾ೦ಕ: 21-ಜುಲೈ-2013 ರ೦ದು ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡ ರ೦ಗಮ೦ದಿರದಲ್ಲಿ ಸ೦ಜೆ 6:30ಕ್ಕೆ ಉತ್ತರಭೂಪ ಬೀಚಿ ನಾಟಕವನ್ನು ಪ್ರದರ್ಶಿಸುತ್ತಿದೆ.