Thursday, August 7, 2014

Lighting Technician, A very good human being Mustafa No More...

Team Antharanga regrets to inform that our beloved and dearest lighting technician Mustafa is no more...He met with an accident and expired while on his way to Bangalore from Shimoga after his daughter's Naming Ceremony.
Our deepest condolences to his family. Its a great loss to the Theatre Fraternity.










Thursday, February 13, 2014

Review of our play "SURYASTA"

ನಮಸ್ಕಾರ,

ಇಂದಿನ "ಪ್ರಜಾವಾಣಿ" ದಿನಪತ್ರಿಕೆಯಲ್ಲಿ ಪ್ರಕಟವಾಗಿರುವ ನಮ್ಮ "ಸೂರ್ಯಾಸ್ತ" ನಾಟಕದ ಬಗೆಗಿನ ವಿಶ್ಲೇಷಣೆ ಇಲ್ಲಿದೆ:

Dear Patrons,
Please find the review that has been published in today's (13th Feb 2014) Prajavani News Paper by Arun Shankar Katpadi as below:


Friday, January 31, 2014

New Kannada Play SURYASTA

ನಮಸ್ಕಾರ!

ಅ೦ತರ೦ಗ ಸಾದರಪಡಿಸುತ್ತಿದೆ 2014ನೇ ವರ್ಷಕ್ಕೆ ಹೊಸ ನಾಟಕ: "ಸೂರ್ಯಾಸ್ತ" 

ಪ್ರತೀ ವರ್ಷದಂತೆ ಈ ಸಲವೂ ಕೂಡ ನಮ್ಮ ತಂಡವು "ನಾಟಕ ಬೆಂಗಳೂರು" ನಾಟಕೋತ್ಸವಕ್ಕಾಗಿ ಹೊಸ ನಾಟಕವೊಂದನ್ನು ಪ್ರಸ್ತುತಪಡಿಸುತ್ತಿದ್ದೇವೆ. ಈ ನಾಟಕದ ಹೆಸರು "ಸೂರ್ಯಾಸ್ತ"

ಮೂಲ: ಜಯವಂತ ದಳ್ವಿ (ಮರಾಠಿ)
ಕನ್ನಡಕ್ಕೆ: ಶಾ. ಮo. ಕೃಷ್ಣರಾಯ 



ನಿರ್ದೇಶನ: ಅರ್ಚನಾ ಶ್ಯಾಂ 
ನಿರ್ವಹಣೆ: ಅಂಕಲ್ ಶ್ಯಾಂ 
ಬೆಳಕು: ಮಾನಸ್ ಸಂಪತ್ 
ರಂಗಸಜ್ಜಿಕೆ ಹಾಗೂ ಪ್ರಸಾದನ: ವಿಜಯ್ ಬೆಣಚ 
ಹಿನ್ನೆಲೆ ಸಂಗೀತ: ರಘು ರಾಂ ಮತ್ತು ರಾಕೇಶ್ 

ಪಾತ್ರಗಳಲ್ಲಿ:
ಶ್ರೀಹರ್ಷ ಗ್ರಾಮ 
ರಾಂ ಮಂಜುನಾಥ್ 
ಅಭಯ್ ಹರ್ಷ 
ದೀಪಕ್ ಸುಬ್ರಮಣ್ಯ 
ಗೀತಾ ಮಣಿ 
ಕಾರ್ತಿಕ್ ಗೌತಮ್ 
ಶ್ರೀ ಹರ್ಷ 
ರಾಧ ರಮೇಶ್ 
ರಮ್ಯ 

ಪ್ರದರ್ಶನ ದಿನಾಂಕ: 7ನೇ ಫೆಬ್ರವರಿ 2014
ಸಮಯ: ಸಂಜೆ 7ಕ್ಕೆ 
ಸ್ಥಳ: ರವೀಂದ್ರ ಕಲಾಕ್ಷೇತ್ರ 
ಟಿಕೆಟ್ ದರ: ರೂ. 50/-

ಮುಂಗಡ ಟಿಕೆಟ್ ಕಾಯ್ದಿರಿಸುವಿಕೆಗಾಗಿ ಕರೆ ಮಾಡಿ:    ಅಂಕಲ್ ಶ್ಯಾಂ 9880914509
ಇಂಟರ್ನೆಟ್ ನಲ್ಲಿ ಟಿಕೆಟ್ ಕೊಳ್ಳಲು ಇಲ್ಲಿಗೆ ಭೇಟಿ ನೀಡಿ: http://in.bookmyshow.com/plays/Kannada-Play-Suryasta/ET00019933 

Like our Page in Facebook to get updates at: www.facebook.com/teamantharanga


Wednesday, November 13, 2013

30th Show of Uttarabhoopa Beechi @ Infosys, Mysore

"ಅ೦ತರ೦ಗ" ಪ್ರಸ್ತುತಪಡಿಸುವ "ರ೦ಗ ಕಾರ್ತೀಕ" ನಾಟಕೋತ್ಸವ ಇದೇ ತಿ೦ಗಳ 14, 15, 16 ಮತ್ತು 17ನೇ ತಾರೀಖಿನ೦ದು ಹನುಮ೦ತನಗರದ ಕೆ.ಎಚ್.ಕಲಾಸೌಧ ದಲ್ಲಿ. ರಬ್ಡಿ, ಶಾಲಭ೦ಜಿಕೆ, ಹರಕೆಯ ಕುರಿ ಮತ್ತು ಅವನು ಗಝಲ್, ಅವಳು ಶಾಯಿರಿ - 4 ದಿನ 4 ನಾಟಕಗಳು. ಉಚಿತ ಪ್ರವೇಶ. ದಯಮಾಡಿ ಬನ್ನಿ ನಾಟಕೋತ್ಸವವನ್ನು ಯಶಸ್ವಿಗೊಳಿಸಿ.


Team Antharanga (ಅ೦ತರ೦ಗ ನಾಟಕ ತ೦ಡ) presents "Ranga Kartika Utsava", a 4-day Drama Festival as a part of Celeberating Antharanga's 34th year of its inception. Rabdi, Shalabhanjike, Harakeya Kuri and Avanu Ghazal, AvaLu Shayari these 4 plays are being staged at KH Kala Soudha from 14th November till 17th November. Free Entry. Please do come and make this festival a grand success.


Wednesday, July 24, 2013

“ಉತ್ತರಭೂಪ ಬೀChi” ನಾಟಕ – ಅಮೋಘ 25ನೇ ಪ್ರದರ್ಶನ.

ಅ೦ತರ೦ಗ ಅಭಿನಯಿಸುವ ನಾಟಕ: ಉತ್ತರಭೂಪ ಬೀChi – ಅಮೋಘ 25ನೇ ಪ್ರದರ್ಶನ.

ರ೦ಗಬ೦ಧುಗಳೆ ಹಾಗೊ ಪ್ರೇಕ್ಷಕರೇ,

ನಮ್ಮ ಅ೦ತರ೦ಗ ತ೦ಡವು 33 ವರ್ಷಗಳಿ೦ದ ರ೦ಗಭೂಮಿಯಲ್ಲಿ ತನ್ನ ಕಲಾ ಸೇವೆಯನ್ನು ಹಿರಿಯ ರ೦ಗಕರ್ಮಿಗಳಾದ ಶ್ರೀಯುತ ಅ೦ಕಲ್ ಶ್ಯಾ೦ ರವರ ನೇತೃತ್ವದಲ್ಲಿ ಸಲ್ಲಿಸುತ್ತಾ ಬ೦ದಿದೆ. ಕಳೆದ 33 ವರ್ಷಗಳಲ್ಲಿ ಸುಮಾರು 50ಕ್ಕೂ ಹೆಚ್ಚು ನಾಟಕಗಳನ್ನು ಹಾಗೂ ಸುಮಾರು 500ಕ್ಕೊ ಹೆಚ್ಚು ಪ್ರದರ್ಶನಗಳನ್ನು ಸಾದರಪಡಿಸಿದೆ.

ಕಳೆದ ನಾಲ್ಕೈದು ವರ್ಷಗಳಿ೦ದ ನಮ್ಮ ತ೦ಡವು ವರ್ಷಕ್ಕೊ೦ದು ನಾಟಕದ೦ತೆ ಹೊಸ ನಾಟಕವನ್ನು ನಾಟಕ ಬೆ೦ಗಳೂರು ಅ೦ಗವಾಗಿ ನಿರ್ಮಿಸಿ ಪ್ರದರ್ಶಿಸುತ್ತಾ ಬ೦ದಿರುವುದು ವಾಡಿಕೆಯಾಗಿದೆ.
ಹೀಗೆ ಕಳೆದ ವರ್ಷ ನಾವು ಕೈಗೆತ್ತುಕೊ೦ಡ ನಾಟಕ: ಉತ್ತರಭೂಪ ಬೀChi.

ಈ ನಾಟಕವನ್ನು ಶ್ರೀಯುತ ಎನ್.ಸಿ. ಮಹೇಶ್ ರವರು ಅ೦ತರ೦ಗದ ಕೋರಿಕೆಯ ಮೇಲೆ ಬರೆದು ಕೊಟ್ಟಿದ್ದು, ಈ ನಾಟಕ ಇಲ್ಲಿಯವರೆಗೂ 24 ಯಶಸ್ವೀ ಪ್ರದರ್ಶನಗಳನ್ನು ಕೊಟ್ಟಿದ್ದು ಇದೀಗ ಅಮೋಘ 25ನೇ ಪ್ರದರ್ಶನಕ್ಕೆ ಸಜ್ಜುಗೊಳ್ಳುತ್ತಿದೆ.
ಶ್ರೀ ಮಹೇಶ್ ರವರು ಈ ನಾಟಕವನ್ನು ಹೆಸರಾ೦ತ ಹಾಸ್ಯ ಸಾಹಿತಿಗಳಾದ ದಿ|| ರಾಯಾಸ೦ ಭೀಮಸೇನ ರಾವ್ ಅರ್ಥಾತ್ ಬೀChi ಯವರ ಸುಧಾವಾರಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ನೀವು ಕೇಳಿದಿರಿ ವಿಭಾಗದ ಆಯ್ದ ಪ್ರಶ್ನೋತ್ತರಗಳನ್ನು ಅಧರಿಸಿದ ಬೀChi ಯವರ ಉತ್ತರಭೂಪ ಹೆಸರಿನ ಪುಸ್ತಕದಿ೦ದ ಆರಿಸಿದ ಪ್ರಶ್ನೋತ್ತರಗಳನ್ನೇ ಉಪಯೋಗಿಸಿಕೊ೦ಡು ಅದರ ಸುತ್ತ ಒ೦ದು ಕಥೆಯನ್ನು ಹೆಣೆದು ನಾಟಕವಾಗಿಸಿಕೊಟ್ಟಿದ್ದು ಅವರ ಚಾಕಚಕ್ಯತೆಯನ್ನು ತೋರಿಸುತ್ತದೆ. ಅವರಿಗೆ ನಾವು ತು೦ಬು ಹೃದಯದಿ೦ದ ಧನ್ಯವಾದಗಳನ್ನು ಅರ್ಪಿಸುತ್ತೇವೆ.

ಈ ನಾಟಕವನ್ನು ಶ್ರೀಮತಿ ಅರ್ಚನಾ ಶ್ಯಾ೦ ರವರು ನಿರ್ದೇಶಿಸಿದ್ದಾರೆ. ಅರ್ಚನಾ ಶ್ಯಾ೦ ರವರ ನಿರ್ದೇಶನದ 5-6 ನಾಟಕಗಳಲ್ಲಿ 25 ಪ್ರದರ್ಶನವನ್ನು ಕಾಣುತ್ತಿರುವ ನಾಟಕ ಉತ್ತರಭೂಪ ಬೀChi”
ಬೆ೦ಗಳೂರು, ತುಮಕೂರು, ಬಳ್ಳಾರಿ, ದಾವಣಗೆರೆಯಲ್ಲಿ ಪ್ರದರ್ಶನಕ್ಕೊಳಗಾಗಿರುವ ಈ ನಾಟಕದ ಎಲ್ಲಾ 24 ಪ್ರದರ್ಶನಗಳೂ ತು೦ಬಿದ ಮನೆ ಯ (House Full) ಪ್ರದರ್ಶನಗಳಾಗಿರುವುದು ಸಾಹಿತಿ ಬೀChi ಯವರ ಬಗೆಗಿನ ಜನರ ಪ್ರೀತಿಯನ್ನು ಎತ್ತಿ ತೋರಿಸುತ್ತದೆ.

ಈ ನಾಟಕದ 25ನೇ ಪ್ರದರ್ಶನವನ್ನು ಸ್ವಾತ೦ತ್ರ್ಯ ದಿನಾಚರಣೆಯ ದಿನದ೦ದು (ಆಗಸ್ಟ್ 15 2013, ಗುರುವಾರ) ಬೆ೦ಗಳೂರಿನ ಹನುಮ೦ತನಗರದ ಕೆ೦ಗಲ್ ಹನುಮ೦ತಯ್ಯ ಕಲಾ ಸೌಧ (ಕೆ.ಎಚ್. ಕಲಾಸೌಧ) ದಲ್ಲಿ ಸ೦ಜೆ 6:30ಕ್ಕೆ ಏರ್ಪಡಿಸಲಾಗಿದೆ. ಟಿಕೆಟ್ ದರ: 70/-. ಮು೦ಗಡ ಟಿಕೆಟ್ ಕಾಯ್ದಿರಿಸಲು  ಕರೆ ಮಾಡಬೇಕಾಗ ಮೊಬೈಲ್ ಸ೦ಖ್ಯೆ: 9880914509.

ಬನ್ನಿ, ನಾಟಕ ನೋಡಿ, ಆನ೦ದಿಸಿ, ಪ್ರೋತ್ಸಾಹಿಸಿ.
ನೀವೂ ಬನ್ನಿ, ನಿಮ್ಮ ಗೆಳೆಯರನ್ನೂ ಕರೆ ತನ್ನಿ.
-          ನಮ್ಮ ಬ್ಲಾಗ್ ವಿಳಾಸ: www.teamantharanga.blogspot.in

-          ನಮ್ಮ ಫೇಸ್ ಬುಕ್ ವಿಳಾಸ: www.facebook.com/teamantharanga